ಶಿವಣ್ಣ ಕನ್ನಡ ಸಿನಿಮಾರಂಗದ ನಾಯಕತ್ವ ವಹಿಸಿಕೊಳ್ಳಲಿ : ಇಂದ್ರಜಿತ್
ಮೈಸೂರು: ಕನ್ನಡಪರ ಹೋರಾಟ ವಿಚಾರದಲ್ಲಿ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು. ಸಿನಿಮಾದವರು ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು. ಸಿನಿಮಾ ರಂಗದಲ್ಲಿ ನಾಯಕತ್ವದ ಕೊರತೆ ಇದೆ.. ಹೀಗಾಗಿ
ಶಿವರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ನಾಯಕತ್ವವಹಿಸಿಕೊಳ್ಳಲಿ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಡಾ. ರಾಜ್ ಕುಮಾರ್ , ಅಂಬರೀಶ್ ಅವರ ನಂತರ ನಾಯಕತ್ವ ಕನ್ಬನಡದ ಸಿನಿಮಾರಂಗಕ್ಕೆ ಸರಿಯಾದ ಇಲ್ಲದಂತಾಗಿದೆ. ಹೀಗಾಗಿ ಕನ್ನಡ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ. ಸಿನಿಮಾ ರಂಗಕ್ಕೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಳ್ಳಬೇಕು. ಅವರ ನಾಯಕತ್ವದಲ್ಲಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ನಾನು ಟ್ವಿಟ್ಟರ್ ಹೋರಾಟದ ವಿರೋಧಿ.
ನಾನು ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳುವಳಿಗೆ ಡಾ ರಾಜ್ಕುಮಾರ್ ಅವರನ್ನು ಕರೆ ತಂದಿದ್ದು ನಮ್ಮ ತಂದೆ ಲಂಕೇಶ್. ಡಾ ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತಾ ಲೇಖನ ಬರೆದಿದ್ದರು. ನಂತರ ಡಾ ರಾಜ್ ಹೋರಾಟಕ್ಕೆ ಬಂದಿದ್ದರು ಎಂದಿದ್ದಾರೆ.. ಈ ಮೂಲಕ ಶಿವರಾಜ್ ಕುಮಾರ್ ಅವರು ಕನ್ನಡ ಸಿನಿಮಾರಂಗದ ನಾಯಕತ್ವ ವಹಿಸಿಕೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ..