ಸ್ಪ್ಯಾನಿಷ್ ನಟಿ ಈಸ್ತರ್ ಅಸೆಬೊ ಮನೆಯಲ್ಲಿ ಗಣೇಶನ ವಿಗ್ರಹ..!
ವಿದೇಶಿಗರು ಅದ್ರಲ್ಲೂ ವಿದೇಶಿ ನಟ ನಟಿಯರು , ಅನ್ಯಧರ್ಮೀಯರು ಹಿಂದೂ ಧರ್ಮವನ್ನು ಮೆಚ್ಚಿಕೊಳ್ತಾ ಕೆಲವರು ಹಿಂದೂ ಆಚಾರ ವಿಚಾರಗಳನ್ನ ಬೆಳೆಸಿಕೊಂಡು , ರೂಡಿಸಿಕೊಂಡು ಬರುತ್ತಿರೋದು ಹೆಚ್ಚಾಗಿದೆ.. ಅದ್ರಲ್ಲೂ ಅನೇಕ ನಟ ನಟಿಯರ ಮನೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನೂ ನಾವು ಕಾಣಬಹುದಾಗಿದೆ.. ಇದೀಗ ‘ ಮನಿ ಹೈಸ್ಟ್ ’ ವೆಬ್ ಸರಣಿಯಲ್ಲಿ ಮೋನಿಕಾ ಗಾಸ್ತಾಂಬೀಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಈಸ್ತರ್ ಅಸೆಬೊ ಮನೆಯಲ್ಲಿ ಗಣಪತಿ ದೇವರ ವಿಘ್ರಹ ಇರಿಸಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು , ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ..
ಕೆಲವು ದಿನಗಳ ಹಿಂದಷ್ಟೆ ನಟಿ ಈಸ್ತರ್ ಅಸೆಬೊ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ತಮ್ಮ ನಂಬಿಕೆಗಳ ಬಗ್ಗೆ, ಧರ್ಮದ ಬಗ್ಗೆಗಿನ ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ನಟಿಯ ಹಿಂದೆ ಗೋಡೆಯ ಮೇಲೆ ದೊಡ್ಡ ವಿನಾಯಕನ ಚಿತ್ರ ಗಮನ ಸಖತ್ ಗಮನ ಸೆಳೆದಿದೆ.. ಅಂದ್ಹಾಗೆ ಈಸ್ತರ್ ಅವರಿಗೆ ಹಿಂದೂ ಸಂಪ್ರದಾಯದ ಬಗ್ಗೆಗಿನ ಒಲವಿನ ಬಗ್ಗೆ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು..
ಅಷ್ಟೇ ಅಲ್ಲ ‘ ‘ ಮನಿ ಹೈಸ್ಟ್ ’ ನ ಮತ್ತೊಬ್ಬ ನಟರಾದ ಪೆಡ್ರೋ ಅಲಾನ್ಸೊ ಅವರು ಹಿಂದೂ ಧರ್ಮದ ಬಗೆಗಿನ ಆಸಕ್ತಿಯ ಬಗ್ಗೆ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದರು.. ಆಗ ಅವರು ಭಗವದ್ಗೀತೆ ಬಗ್ಗೆ ಓದಿರುವುದಾಗಿಯೂ ಹೇಳಿಕೊಂಡಿದ್ದರು.. ತಮ್ಮ ಬಳಿಯಿದ್ದ ಭಗವದ್ಗೀತೆ ಪುಸ್ತವನ್ನೂ ತೋರಿಸಿದ್ದರು.. ಅಲ್ಲದೇ ತಮ್ಮ ಮನೆಯಲ್ಲಿ ಗಣಪತಿ ಫೋಟೋ ಇರುವುದಾಗಿಯೂ ತಿಳಿಸಿದ್ದರು..