Raghavendra Rajkumar : ಕನ್ನಡಿಗರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಸಿನಿಮಾ ಅಂದ್ರೆ ಅದು ನಮ್ಮ ಅಪ್ಪು ಅಭಿನಯದ ಜೇಮ್ಸ್. Power Star Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಕೊನೆಯ ಸಿನಿಮಾ ಇದಾಗಿರುವುದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣ. ಜೊತೆಗೆ ಈ ಸಿನಿಮಾದಲ್ಲಿ ಅಪ್ಪು ಸೈನಿಕನ ಗೆಟಪ್ ನಲ್ಲಿ ಮಿಂಚುತ್ತಿರೋದು ಕೂಡ ಸಿನಿಮಾ ಮೇಲಿನ ನಿರೀಕ್ಷೆ ಆಕಾಶ ಮುಟ್ಟಿದೆ.
ಅಂದಹಾಗೆ ಈ ಸಿನಿಮಾದ ಕೆಲಸ ಇನ್ನೂ ಬಾಕಿ ಇರುವಾಗ್ಲೇ ಅಪ್ಪು ಬಾರದ ಲೋಕಕ್ಕೆ ಪಯಣಿಸಿದರು. ಹೀಗಾಗಿ ಅವರ ಪಾತ್ರದ ಡಬ್ಬಿಂಗ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು. ಇದಕ್ಕೆ ಶಿವಣ್ಣನೇ ಮುಂದೆ ಬಂದು ನಾವೇ ಡಬ್ ಮಾಡುತ್ತೇನೆ ಅಂತ ಹೇಳಿದ್ರು. ಇಲ್ಲಿಗೆ ದೊಡ್ಡ ಕುತೂಹಲಕ್ಕೆ ತೆರೆ ಬಿದ್ದಂತೆ ಆಗಿತ್ತು. ಇದೀಗ ಹೊಸ ವಿಚಾರ ಏನಂದರೇ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ಜೇಮ್ಸ್ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಾಘಣ್ಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಇಲ್ಲಿ ರಾಘಣ್ಣ ಡಬ್ ಮಾಡಿರೋದು ಅವರದ್ದೇ ಪಾತ್ರಕ್ಕೆ.
ಹೌದು..! ಜೇಮ್ಸ್ ಸಿನಿಮಾದಲ್ಲಿ ರಾಘಣ್ಣ ಬಣ್ಣ ಹಚ್ಚಿದ್ದು, ಆ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಘಣ್ಣ, ಅಪ್ಪು ಅಭಿನಯದ ‘ಜೇಮ್ಸ್’ ಚಿತ್ರದಲ್ಲಿನ ನನ್ನ ಪಾತ್ರದ ಡಬ್ಬಿಂಗ್ ಪ್ರಕ್ರಿಯೆ ಮುಗಿದಿದೆ. ನನ್ನ ಹಾಗೂ ಶಿವಣ್ಣನ ಪಾತ್ರವು ನಮ್ಮೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಣೆ ಅಂತಾ ಬರೆದುಕೊಂಡಿದ್ದಾರೆ.
ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ ಕಟ್ ನ ಜೇಮ್ಸ್ ಸಿನಿಮಾವನ್ನು ಮೊದಲಿಗೆ ಕನ್ನಡ ಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಅಪ್ಪು ಅಗಲಿಕೆಯ ಕಾರಣದಿಂದಾಗಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಷಯ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಕಂಡು ಬಂದಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.