KGF 2 : OTT ಅಲ್ಲಿ ಯಾವಾಗ ಅಬ್ಬರಿಸೋದು ರಾಕಿ ಭಾಯ್..!!
KGF 2 ಬಾಕ್ಸ್ ಆಫೀಸ್ ನಲ್ಲಿ ಎಬ್ಬಿಸಿರುವ ತೂಫಾನ್ ಗೆ ಬಾಲಿವುಡ್ ಭದ್ರ ಬುನಾದಿ ಅಲುಗಾಡಿದೆ.. ಥಿಯೇಟರ್ ಗಳಲ್ಲಿ ಒನ್ ಅಂಡ್ ಓನ್ಲಿ ರಾಕಿ ಹವಾ ಇದೆ.. ಜೆರ್ಸಿ ಇದ್ರೂ ಇಲ್ಲದಂತೆ ಇದೆ..
ಹೀಗೆ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಾ ದೊಡ್ಡ ದೊಡಡ್ಡ ಸಿನಿಮಾಗಳ ರೆಕಾರ್ಡ್ ಧೂಳಿಪಟ ಮಾಡಿರುವ ಕನ್ನಡದ ಸಿನಿಮಾ ಒಟಿಟಿಯಲ್ಲಿ ಅಬ್ಬರ ಶುರು ಮಾಡೋದ್ಯಾವಾಗ… ಥಿಯೇಟರ್ ನಲ್ಲಿ ನೋಡಿದ್ರೂ ಮತ್ತೆ ಸಿನಿಮಾವನ್ನ ನೋಡಬೇಕು.. ಥಿಯೇಟರ್ ನಲ್ಲಿ ನೋಡಲಾಗದೇ ಒಟಿಟಿಯಲ್ಲಿ ನೋಡಬೇಕಂತ ಇರೋರಿಗೆ ಇಲ್ಲಿದೆ ಗುಡ್ ನ್ಯೂಸ್..
Sandalwood : ಜವಾರಿ ಭಾಷೆಯ ‘ಬಯಲುಸೀಮೆ’ ಸಿನಿಮಾ ಆಡಿಯೋ ಲಾಂಚ್
ಸಿನಿಮಾ ಒಟಿಟಿಯಲ್ಲಿ ಯಾವಾಗ ರಿಲೀಸ್ ಆಗಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ…
ಹೌದು..! KGF 2 ರ ವದಂತಿಗಳ ಪ್ರಕಾರ ಇದು ಮೇ 27 ಅಥವಾ ಜೂನ್ನಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು , ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತದೆ. ಆದ್ರೆ ಅಧಿಕೃತವಾಗಿ ಸಿನಿಮಾತಂಡ ಘೋಷಣೆ ಮಾಡಿಲ್ಲ.. ಅಂದ್ಹಾಗೆ KGF ಚಾಪ್ಟರ್ 1 ಸಹ ಈಗಾಗಲೇ ಅಮೇಜಾನ್ ನಲ್ಲಿ ಲಭ್ಯವಿದೆ..