ದುಬೈನಲ್ಲಿ ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಸ್ಕ್ರಿಪ್ಟ್ ಚರ್ಚೆ
ರಾಜಮೌಳಿ ಅವರು ಸದ್ಯ RRR ಸಿನಿಮಾದ ಸಕ್ಸಸ್ ನಂತರ ಮಹೇಶ್ ಬಾಬು ಅವರಿಗೆ ಸಿನಿಮಾ ಮಾಡುವ ತಯಾರಿ ನಡೆಸುತ್ತಿದ್ದಾರೆ. ಇತ್ತ ಮಹೇಶ್ ಬಾಬು ಸರ್ಕಾರಿ ವಾರು ಪಾಟ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದಾರೆ..
ಬಾಹುಬಲಿ 2 , RRR ನ ನಂತರ ಇಡೀ ದೇಶವೇ ರಾಜಮೌಳಿ ಅವರ ಮುಂಬರುವ ಸಿನಿಮಾದ ಮೇಲೆ ಚಿತ್ತ ಹರಿಸಿದೆ. ಅದ್ರಲ್ಲೂ ಮಹೇಶ್ ಬಾಬು ಅವರು ಹಿರೋ ಅನ್ನೋದು ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ..
ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿರುವ ಮಾಹಿತಿ ಪ್ರಕಾರ ಮಹೇಶ್ ಬಾಬು ಹಾಗೂ ರಾಜಮೌಳಿ ಅವರು ದುಬೈನಲ್ಲಿ ಸ್ಕ್ರಿಪ್ಟ್ ಚರ್ಚಿಸಲು ಭೇಟಿಯಾಗಲಿದ್ದಾರೆ ಎನ್ನಲಾಗ್ತಿದೆ…
ತಾತ್ಕಾಲಿಕವಾಗಿ ಈ ಸಿನಿಮಾವನ್ನ SSMB29 ಎಂದು ಕರೆಯಲಾಗ್ತಿದೆ. ಚಿತ್ರವು ಈ ವರ್ಷದ ಕೊನೆಯಲ್ಲಿ ಸೆಟ್ಟೇರಬಹುದೆನ್ನಲಾಗ್ತಿದೆ..
ಮೂಲಗಳ ಪ್ರಕಾರ KL ನಾರಾಯಣ ಅವರು ತಮ್ಮ ಬ್ಯಾನರ್ ಶ್ರೀ ದುರ್ಗಾ ಆರ್ಟ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಪ್ಯಾನ್ ಇಂಡಿಯನ್ ಸಿನಿಮಾದ ಬಜೆಟ್ 500 ರಿಂದ 800 ಕೋಟಿ ಎಂದು ವರದಿಯಾಗಿದೆ. ಇದು ತೆಲುಗು, ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ.