Beast | ಸೂಪರ್ ಸ್ಟಾರ್ ವರ್ಸಸ್ ದಳಪತಿ.. ಫ್ಯಾನ್ಸ್ ಟ್ವಿಟ್ಟರ್ ವಾರ್
Mahesh Fans Vijay Fans : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಟ್ವಿಟರ್ ವಾರ್ ಶುರುವಾಗಿದೆ. ಈ ಸ್ಟಾರ್ ಹೀರೋಗಳಿಗೆ ದಕ್ಷಿಣದಲ್ಲಿ ಒಳ್ಳೆಯ ಕ್ರೇಜ್ ಇದೆ. ತೆಲುಗಿನ ಜೊತೆಗೆ ತಮಿಳಿನಲ್ಲೂ ಮಹೇಶ್ ಗೆ ಒಳ್ಳೆಯ ಫಾಲೋಯಿಂಗ್ ಇದೆ. ಅವರ ಹಲವು ಚಿತ್ರಗಳು ತಮಿಳಿಗೆ ಡಬ್ ಆಗಿವೆ. ವಿಜಯ್ ಅವರು ಮಹೇಶ್ ಅಭಿನಯದ ಹಲವಾರು ಚಿತ್ರಗಳನ್ನು ತಮಿಳಿನಲ್ಲಿ ರೀಮೇಕ್ ಮಾಡಿ ಹಿಟ್ ಸಾಧಿಸಿದ್ದಾರೆ. ಈ ಇಬ್ಬರು ನಾಯಕರ ನಡುವೆ ಉತ್ತಮ ಆತ್ಮೀಯತೆ ಇದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಮಹೇಶ್, ವಿಜಯ್ ಒಳ್ಳೆಯ ಸ್ನೇಹಿತರು. ಆದರೆ ಈ ಇಬ್ಬರು ನಾಯಕರ ಅಭಿಮಾನಿಗಳ ನಡುವೆ ಹೊಂದಾಣಿಕೆಯೇ ಇಲ್ಲದಂತಾಗಿದೆ.
ಹೌದು..! ಈ ಇಬ್ಬರು ಹೀರೋಗಳ ಅಭಿಮಾನಿಗಳ ಮಧ್ಯೆ ಟ್ವಿಟ್ಟರ್ ನಲ್ಲಿ ವಾರ್ ಶುರುವಾಗಿದೆ. ವಾಸ್ತವವಾಗಿ, ಈ ರೀತಿಯ ಅಭಿಮಾನಿಗಳ ಯುದ್ಧ ಹೊಸದೇನಲ್ಲ. ಅನೇಕ ಸ್ಟಾರ್ ಹೀರೋಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ವೀಟ್ ವಾರ್ ನಡೆಸುತ್ತಲೇ ಇರುತ್ತಾರೆ. ಈಗ ಮಹೇಶ್ ಮತ್ತು ವಿಜಯ್ ಅಭಿಮಾನಿಗಳ ಸರದಿ ಬಂದಿದೆಯಷ್ಟೆ.
ಇನ್ನು ಈ ವಾರ್ ಶುರುವಾಗಿದ್ದು ಯಾಕೆ ಅಂದ್ರೆ, ಮಹೇಶ್ ಬಾಬು ಅಭಿನಯದ ‘ಸರ್ಕಾರ್ ವಾರಿ ಪಾಟ’ ಚಿತ್ರದ ಮೊದಲ ಸಿಂಗಲ್ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಅದೇ ದಿನ ವಿಜಯ್ ಅಭಿನಯದ ಬೀಸ್ಟ್ ಸಿಂಗಲ್ ಕೂಡ ಬಿಡುಗಡೆಯಾಗಲಿದೆ. ತಮ್ಮ ಹೀರೋಗಳ ಹಾಡುಗಳನ್ನು ಖುಷಿಯಿಂದ ಎಂಜಾಯ್ ಮಾಡಲು ರೆಡಿಯಾಗಿರುವ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಒಬ್ಬರನ್ನೊಬ್ಬರು ಟೀಕಿಸಿಕೊಳ್ಳುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ‘ಬೀಸ್ಟ್’ ಟ್ರ್ಯಾಕ್ ಲೈಕ್ಸ್ ಹೆಚ್ಚಿಸಲು ವಿಜಯ್ ಅಭಿಮಾನಿಗಳು ಬಾಟ್ಸ್ ಗಳನ್ನು ಬಳಸುತ್ತಾರೆಂದು ಮಹೇಶ್ ಅಭಿಮಾನಿಗಳು ಆರೋಪಿಸಿದ್ದು ಇಲ್ಲಿಂದ ಜಗಳ ಶುರುವಾಗಿದೆ. ಮಹೇಶ್ ಅಭಿಮಾನಿಗಳ ಟ್ವೀಟ್ ಗಳನ್ನು ನೋಡಿದ ವಿಜಯ್ ಅಭಿಮಾನಿಗಳು.. ಮಹೇಶ್ ಅಭಿಮಾನಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಪರಸ್ಪರ ಕಮೆಂಟ್ಸ್ ಗಳನ್ನ ಮಾಡುತ್ತಾ ಕಿತ್ತಾಡುತ್ತಿದ್ಧಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.
James | ಗನ್.. ಗಟ್ಸ್.. ಪೈಟ್ಸ್.. ಪವರ್..!! ಹೇಗಿದೆ ಜೇಮ್ಸ್ ಟೀಸರ್..