James : ಕಲೆಕ್ಷನ್ ನಲ್ಲಿ ಬಾಹುಬಲಿ ರೆಕಾರ್ಡ್ ಪೀಸ್ ಪೀಸ್..!!!
ಮಾರ್ಚ್ 17 ರಿಂದ ಕರ್ನಾಟಕದಲ್ಲಿ ಜೇಮ್ಸ್ ಜಾತ್ರೆ ಆರಂಭವಾಗಿದೆ.. ಜೇಮ್ಸ್ ಈಗಾಗಲೇ 100 ಕೋಟಿ ರೂ ಕ್ಲಬ್ ಸೇರಿದೆ.. ಈ ವಾರದೊಳಗೆ 100 ಕೋಟಿ ರೂ ಕ್ಲಬ್ ಸೇರುವುದು ಬಹುತೇಕ ಪಕ್ಕಾ…
ಆದ್ರೆ ಇಡೀ ವಿಶ್ವಾದ್ಯಂತ ಅಬ್ಬರಿಸಿದ್ದ ರಾಜಮೌಳಿ ಹಾಗೂ ಪ್ರಭಾಸ್ ಕಾಂಬಿನೇಷನ್ ನ ಬಾಹುಬಲಿ ಸಿನಿಮಾದ ಎರೆಡು ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ. ಜೊತೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಸಹ ಹಿಂದಿಕ್ಕಿದೆ..
ಹೌದು ಐಎಮ್ ಬಿಡಿ ರೇಟಿಂಗ್ ವಿಚಾರದಲ್ಲಿ ಜೇಮ್ಸ್ ಸಿನಿಮಾಗೆ 9.9 ಸಿಕ್ಕಿದ್ರೆ , ದಿ ಕಾಶ್ಮೀರ್ ಫೈಲ್ಸ್ ಗೆ ಸಿಕ್ಕಿರುವುದು 8.3..
ಇನ್ನೂ ಬಾಹುಬಲಿ ಪಾರ್ಟ್ 1 ಸಿನಿಮಾ ರಿಲೀಸ್ ಆದಾಗ ಕರ್ನಾಟಕದಲ್ಲಿ ಫಸ್ಟ್ ಡೇ ಕಲೆಕ್ಷನ್ ಬಂದು 16-17 ಕೋಟಿ ರೂ.. ಆದ್ರೆ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ 18 – 20 ಕೋಟಿ ರೂಪಾಯಿ ಎನ್ನಲಾಗ್ತಿದೆ..
ಅಂದ್ಹಾಗೆ ಬಾಹುಬಲಿಗೂ ಮುಂಚೆ ಅಪ್ಪು ಅವರ ಅಭಿನಯದ ರಾಜಕುಮಾರ ಸಿನಿಮಾ ಫಸ್ಟ್ ಡೇ 7.4 ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿತ್ತು.. ಆರೆಕಾರ್ಡ್ ವಮುರಿದಿದ್ದು ಬಾಹುಬಲಿ, ಈಗ ಬಾಹುಬಲಿ ರೆಕಾರ್ಡ್ ಮುರಿದಿರೋದು ಅಪ್ಪು ಸಿನಿಮಾ ಜೇಮ್ಸ್..
ಹಾಗೆ ಬಾಹುಬಲಿಗೆ ಐಎಮ್ ಬಿಡಿ ರೇಟಿಂಗ್ 8.1 , ಜೇಮ್ಸ್ ಗೆ ಸಿಕ್ಕಿರೋದು 9.9.. ಹೀಗೆ ಅಪ್ಪು ಸಿನಿಮಾ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಿದೆ..