James : ಐಎಂಡಿಬಿ ರೇಟಿಂಗ್ ನಲ್ಲಿ ‘ದಿ ಕಾಶ್ಮೀರಿ ಫೈಲ್ಸ್’ ಹಿಂದಿಕ್ಕಿದ ಜೇಮ್ಸ್
ಮಾರ್ಚ್ 17 ರಂದು ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಜೇಮ್ಸ್ ಸಿನಿಮಾ ಪವರ್ ಫುಲ್ ಎಂಟ್ರಿಯನ್ನೇ ಪಡೆದಿತ್ತು.. ಇನ್ನೂವರೆಗೂ ಥಿಯೇಟರ್ ಗಳು ಹೌಸ್ ಫುಲ್ ಆಗಿವೆ.. ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ 35 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅಂತಾ ಅಪ್ಪು ಸಿನಿಮಾ ಜೇಮ್ಸ್ ಮತ್ತೆ ರುಜು ಮಾಡಿದೆ. ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾಗೆ ಭರ್ಜರಿಗೆ ಯಶಸ್ಸು ಸಿಕ್ಕಿದೆ.
ಈ ಮಧ್ಯೆ ಜೇಮ್ಸ್ ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿರುವ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಹಿಂದಿಕ್ಕಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.
ಐಎಂಡಿಬಿ ರೇಟಿಂಗ್ನಲ್ಲಿ (IMDb Rating) ಈ ಸಿನಿಮಾಗಳ ನಡುವೆ ಪೈಪೋಟಿ ಇದೆ. ಇದರಲ್ಲಿ ‘ಜೇಮ್ಸ್’ ಸಿನಿಮಾ 10ಕ್ಕೆ 9.9 ರೇಟಿಂಗ್ ಪಡೆದುಕೊಂಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ 8.3 ರೇಟಿಂಗ್ ನೀಡಲಾಗಿದೆ. ಆ ಮೂಲಕ ಹಿಂದಿ ಸಿನಿಮಾವನ್ನೂ ಮೀರಿಸಿ, ರೇಟಿಂಗ್ ವಿಚಾರದಲ್ಲಿ ‘ಜೇಮ್ಸ್’ ಗಮನ ಸೆಳೆಯುತ್ತಿದೆ.