The Kashmir Files : ಕೇಜ್ರಿವಾಲ್ ವಿರುದ್ಧ ಕಟುವಾಗಿ ಕಿಡಿಕಾರಿದ ವಿವೇಕ್ ಅಗ್ನಿಹೋತ್ರಿ
ಸದ್ಯಕ್ಕೆ ದೇಶಾದ್ಯಂತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ್ದೇ ಚರ್ಚೆ.. ಸೋಷಿಯಲ್ ಮೀಡಿಯಾದಿಂದ ಹಿಡಿದು , ಸಿನಿಮಾರಂಗ ರಾಜಕೀಯವಾಗಿಯೂ ಈ ಸಿನಿಮಾದ ಬಗ್ಗೆ ಮಾತನಾಡಲಾಗ್ತಿದೆ.. ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ.. ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್ 200 ಕೋಟಿ ಗಡಿ ದಾಟಿದೆ.. ಅಷ್ಟೇ ಅಲ್ದೇ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಹಲವು ರಾಜಕೀಯ ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹ ಸಿನಿಮಾಗೆ ಬೆಂಬಲ ನೀಡಿದ್ದಾರೆ..
ಅಂತೆಯೇ ಅನೇಕರೂ ಸಿನಿಮಾದ ವಿರುದ್ಧವೂ ಮಾತನಾಡಿದ್ದಾರೆ.. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇತ್ತೀಚೆಗೆ ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು, ಬಿಜೆಪಿಯವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್ಗೆ ಫ್ರೀಯಾಗಿ ನೀಡಲಿ , ಎಂದಿದ್ದರು.
ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ..ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದರು.
ಇದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಮೂರ್ಖರು, ಹುಚ್ಚರು, ಬುದ್ಧಿ ಇಲ್ಲದವರಿಗೆ ಉತ್ತರಿಸಬಾರದು ಎಂದು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ..
ವಿವೇಕ್ ಅಗ್ನಿಹೋತ್ರಿ ಅವರು ಶುಕ್ರವಾರ ಭೋಪಾಲ್ನ ಮಖನ್ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾಲಯದಲ್ಲಿ ಚಿತ್ರ ಭಾರತಿ ಚಲನಚಿತ್ರೋತ್ಸವಕ್ಕೆ ಆಗಮಿಸಿದ್ದರು. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕ ಜನ ದೇವರು ಭೂಮಿಗೆ ಬರಬೇಕೆಂದು ಬಯಸುತ್ತಾರೆ. ಕೆಲವು ಮೂರ್ಖರು, ಹುಚ್ಚರು, ಬುದ್ಧಿಇಲ್ಲದವರು ಇರುತ್ತಾರೆ. ಈ ಮೂರು ವರ್ಗದ ಜನರಿಂದ ತಪ್ಪಿಸಿಕೊಳ್ಳಬೇಕು. ಅಂತವರಿಗೆ ಉತ್ತರಿಸಬಾರದು ಎಂದು ಖಾರವಾಗಿ ತಿರುಗೇಟು ನೀಡಿದ್ಧಾರೆ..