The Kashmir Files : ವಿವೇಕ್ ಅಗ್ನಿಹೋತ್ರಿ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳಿದ್ದೇನು..??
The Kashmir Files ದಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..

ಅಂದ್ಹಾಗೆ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ ಸಲೋನ್ ಒಂದರ ಹೊರಗಡೆ ಕಾಣಿಸಿಕೊಂಡಿದ್ದಾರೆ..
ಈ ವೇಳೆ ಅವರನ್ನ ಮಾಧ್ಯಮದವರು ಅವರನ್ನ ಸುತ್ತುವರೆದಿದ್ದರು.. ಕ್ಯಾಮೆರಾಮನ್ ಒಬ್ಬರು The Kashmir Files ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..
ಅವರ ಮಾತಿಗೆ ವಿವೇಕ್ ಅಗ್ನಿಹೋತ್ರಿ ಅವರು ವಿನಮ್ರವಾಗಿ ಉತ್ತರಿಸಿ ಧನ್ಯವಾದಗಳನ್ನ ತಿಳಿಸಿದ್ದಾರೆ..
ಇದೇ ವೇಳೆ ಬಾಕ್ಸ್ ಆಫೀಸ್ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು ವಿವೇಕ್ ಈ ಸಿನಿಮಾ ಹಣದ ಬಗ್ಗೆ ಅಲ್ಲ. ಒಳ್ಳೆಯ ಸಂಗತಿ ಎಂದರೆ ಚಿತ್ರ ಜನರನ್ನು ಒಂದೆಡೆ ಸೇರಿಸುತ್ತಿದೆ. ನಮಗೆ ಇನ್ನೇನು ಬೇಕು? ಎಂದಿದ್ಧಾರೆ..