‘Beast’ ಮನಿ ಹೀಸ್ಟ್ ಕಾಪಿ ಎನ್ನುತ್ತಿದ್ದಾರೆ ನೆಟಿಜನ್ … ಯಾಕೆ..??
ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅವರ ಬಹು ನಿರೀಕ್ಷಿತ ಚಿತ್ರ ಬೀಸ್ಟ್ ಬಿಡುಗಡೆಗೆ ಸಿದ್ಧವಾಗಿದೆ.. ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ಬಿರುಗಾಳಿ ಎದ್ದಿದೆ.. ಏಪ್ರಿಲ್ 13 ಕ್ಕೆ ಬಿಗ್ ಸ್ಕ್ರೀನ್ ಮೇಲೆ ಬೀಸ್ಟ್ ತೆರೆ ಕಾಣಲಿದೆ..
ಚಿತ್ರದ ನಿರ್ಮಾಪಕರು ಚಿತ್ರದ ಆಕ್ಷನ್-ಪ್ಯಾಕ್ಡ್ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ನಡುವೆ ಪ್ರತಿ ಸಿನಿಮಾಗೆ ಏನಾದ್ರೂ ಒಂದು ಕೊಂಕಾಡುವ ನೆಟಿಜನ್ ಬೀಸ್ಟ್ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ…
ಕೆಲ ನೆಟ್ಟಿಗರು ಬೀಸ್ಟ್ ಸಿನಿಮಾವನ್ನ ಮನಿ ಹೀಸ್ಟ್ ಸಿನಿಮಾದ ಜೊತೆಗೆ ಹೋಲಿಕೆ ಮಾಡಿ ಮಾತನಾಡ್ತಿದ್ದಾರೆ..
ಬೀಸ್ಟ್ ಟ್ರೈಲರ್ ಬಿಡುಗಡೆಯಾದ ನಂತರ ಹಲವಾರು ನೆಟಿಜನ್ಗಳು ಟ್ವಿಟರ್ ನಲ್ಲಿ ಈ ಸಿನಿಮಾ ಹಾಗೂ ಮನಿ ಹೀಸ್ಟ್ ನಡುವೆ ಅನೇಕ ಗಮನಾರ್ಹ ಹೋಲಿಕೆಗಳಿವೆ ಎಂದು ವಾದಿಸುತ್ತಿದ್ದಾರೆ.. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಲು ಮತ್ತು ದರೋಡೆಕೋರ ವಿರುದ್ಧ ಹೋರಾಡಲು ಸೇನಾ ಅಧಿಕಾರಿಗಳು ಮಾರುವೇಷದಲ್ಲಿ ಕಳುಹಿಸಲ್ಪಟ್ಟ ವಿಜಯ್ ಪಾತ್ರವನ್ನು ಅವರು ಮನಿ ಹೀಸ್ಟ್ನಲ್ಲಿ ಗಾಂಡಿಯಾ ಪಾತ್ರಕ್ಕೆ ಹೋಲಿಸಿದ್ದಾರೆ.