KGF 2 Gagana Nee Song : KGF 2 ಹಾಡು ರಿಲೀಸ್… ಇದು ಮಾಸ್ ಅಲ್ಲ ಎಮೋಷನಲ್..!!
ಮಾರ್ಚ್ 27 ರ ಸಂಜೆ ಸುನಾಮಿಯಂತೆ ಸೋಷಿಯಲ್ ಮೀಡಿಯಾಗೆ ಅಪ್ಪಳಿಸಿದ KGF 2 ಟ್ರೇಲರ್ ಈಗಲೂ ಟ್ರೆಂಡಿಂಗ್ ನಂ.1 ನಲ್ಲಿದೆ.. ಟ್ರೇಲರ್ ನೋಡಿ ನೆಟ್ಟಿಗರ ಹಾರ್ಟ್ ಬೀಟ್ ಹೆಚ್ಚಾಗಿದೆ.. ಅಂದ್ಹಾಗೆ ಟೀಸರ್ ಯಾವ ರೀತಿ ಎಲ್ಲಾ ರೆಕಾರ್ಡ್ ಗಳ ಚಿಂದಿ ಚಿತ್ರಾನ್ನ ಮಾಡಿ ಹಾಕಿತ್ತೋ ಅದೇ ರೀತಿಯೇ KGF 2ಟ್ರೇಲರ್ ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ರೆಕಾರ್ಡ್ ಮಾಡಿದೆ..
ಕನ್ನಡಕ್ಕಿಂತ ತೆಲುಗು , ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆ.. ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀವ್ಸ್ ಒಟ್ಟುಗೂಡಿ ಹೇಳಿದ್ರೆ , ಬೇರೆಲ್ಲಾ ಸಿನಿಮಾಗಳ ರೆಕಾರ್ಡ್ ಮುಂದೆ ಧೂಳೆಬ್ಬಿಸಿದೆ…ಸದ್ಯ ಕೆಜಿಎಫ್ 2 ಟೀಮ್ ಪ್ರಚಾರ ಕೆಲಸ ಶುರು ಮಾಡಿಕೊಂಡಿದೆ..
ಈ ಹಿಂದೆ ಸಿನಿಮಾದ ತೂಫಾನ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಸಿದೆ.. ಇದೀಗ ಸಿನಿಮಾದ ಮತ್ತೊಂದು ಮನ ಮಿಡಿಯುವ ಹಾಡನ್ನ ರಿಲೀಸ್ ಮಾಡಲು ಹೊರಟಿದೆ ಸಿನಿಮಾತಂಡ.. ಹಾಡು ಇಂದೇ ( ಏಪ್ರಿಲ್ 6 ) ರಿಲೀಸ್ ಆಗ್ತಿದೆ.. ಏಪ್ರಿಲ್ 06 ರಂದು ಕೆಜಿಎಫ್ 2 ಸಿನಿಮಾದ ಭಾವನಾತ್ಮಕ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಲಿದೆ. ಇದು ಮಾಸ್ ಅಲ್ಲ ಬದಲಾಗಿ ಎಮೋಷನಲ್ ಹಾಡು…
ಲಿರಿಕಲ್ ಹಾಡು ಬಿಡುಗಡೆ ಮಾಡುವ ಬಗ್ಗೆ ‘ಕೆಜಿಎಫ್’ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ‘ಗಗನ ನೀ’ ಎಂದು ಪ್ರಾರಂಭವಾಗುವ ಈ ಹಾಡು, ಹಿಂದಿಯಲ್ಲಿ ‘ಫಲಕ್ ತು, ಗರಜ್ ತು’ ಎಂಬ ಸಾಲಿನಿಂದ ಆರಂಭವಾಗಲಿದೆ..
ಹಾಡು ಬಿಡುಗಡೆ ಆಗಲಿದೆ ಎಂದು ಮಾಹಿತಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಬಟ್ಟೆಯಿಂದ ಮಾಡಿದ ತೊಟ್ಟಿಲಿನ ಚಿತ್ರವಿದೆ.
KGF 2 VS Beast VS Jercy : ವಿಜಯ್ ಫ್ಯಾನ್ ನಾನು ಎಂದ ಶಾಹಿದ್ KGF 2 ಬಗ್ಗೆ ಹೇಳಿದ್ದೇನು..!!
Prabhas : ಶಸ್ತ್ರ ಚಿಕಿತ್ಸೆಗೆ ಒಳಗಾಗ್ತಿರುವ ‘ಬಾಹುಬಲಿ’ .!! ಏನಾಯ್ತು..??
ತಲೆ ಬೋಳಿಸಿಕೊಂಡಿದ್ದು ಸುಳ್ಳು : ಜನರನ್ನ ಫೂಲ್ ಮಾಡಿದ ಸಂಜನಾ..!!