KGF 2 VS Beast VS Jercy
KGF 2 VS Beast VS Jercy : ವಿಜಯ್ ಫ್ಯಾನ್ ನಾನು ಎಂದ ಶಾಹಿದ್ KGF 2 ಬಗ್ಗೆ ಹೇಳಿದ್ದೇನು..!!
ಏಪ್ರಿಲ್ 14 ಕ್ಕೆ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಬಹುನಿರೀಕ್ಷೆಯ KGF 2 ಸಿನಿಮಾ ರಿಲೀಸ್ ಆಗ್ತಿದೆ.. ಆದ್ರೆ ಏಪ್ರಿಲ್ 13 ಕ್ಕೆ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ BEAST ರಿಲೀಸ್ ಆಗ್ತಿದೆ.. ಇವರೆಡೂ ಸೌತ್ ಸಿನಿಮಾಗಳು ಬಾಲಿವುಡ್ ಸೇರಿದಂತೆ ದೇಶಾದ್ಯಂತ , ವಿದೇಶಗಳಲ್ಲೂ ಅಬ್ಬರಿಸಲಿವೆ.. ಎರೆಡೂ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಫೈಟ್ ಇರಲಿದೆ..
ಆದ್ರೆ ಇದೆರೆಡೂ ದೈತ್ಯ ಸಿನಿಮಾಗಳ ನಡುವೆ ಬಾಲಿವುಡ್ ನಟ ಶಾಹೀದ್ ಕಪೂರ್ ಅವರ ನಟನೆಯ ತೆಲುಗಿನ ರೀಮೇಕ್ ಸಿನಿಮಾ ಜೆರ್ಸಿ ಕೂಡ ರಿಲೀಸ್ ಆಗ್ತಿದೆ.. ಈ ಸಿನಿಮಾ KGF 2 ಹಾಗೂ BEAST ಜೊತೆಗೆ ಫೈಟ್ ಕೊಡಲಿದ್ಯಾ ಅನ್ನೋ ಚರ್ಚೆ ನಡೆಯುತ್ತಿದೆ.. ಬಹುತೇಕ ಸಿನಿ ಪಂಡಿತರು ಹೇಳೋ ಪ್ರಕಾರ ಶಾರುಖ್ ಖಾನ್ ಅವರ ಝೀರೋ ಸಿನಿಮಾ ಯಾವ ರೀತಿ ಕೆಜಿಎಫ್ ಮುಂದೆ ಮಕಾಡೆ ಮಲಗಿತ್ತೋ ಅದೇ ರೀತಿ ಇವೆರೆಡೂ ಸಿನಿಮಾಗಳ ನಡುವೆ ಸಿಲುಕಿ ಜೆರ್ಸಿ ಒದ್ದಾಡಿ ಹೆಸರಿಲ್ಲದಂಗೆ ಹೊರಟು ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.. ಇದೆಲ್ಲದರ ನಡುವೆ ಮೂರೂ ಸಿನಿಮಾಗಳು ಪ್ರಮೋಷನ್ ಮಾಡ್ತಿವೆ..
ಇತ್ತ ಜೆರ್ಸಿ ಸಿನಿಮಾದ ಪ್ರಚಾರದ ವೇಳೆ ಶಾಹಿದ್ ಒಂದು ಅಚ್ಚರಿಇಯ ಹೇಳಿಕೆ ನೀಡಿದ್ದಾರೆ.. “ನಾನು ದಳಪತಿ ವಿಜಯ್ ಅವರ ದೊಡ್ಡ ಅಭಿಮಾನಿ ಅವರ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ಅವರು ಒಬ್ಬ ಉತ್ತಮ ಡ್ಯಾನ್ಸರ್. ಬೀಸ್ಟ್ ಸಿನಿಮಾ ಅತ್ಯದ್ಭುತ ಸಿನಿಮಾ ಆಗುತ್ತೆ ಎನ್ನುವ ನಂಬಿಕೆ ಇದೆ.” ಎಂದಿದ್ದಾರೆ.
ಹಾಗಂತ ಬರಿ ಬೀಸ್ಟ್ ಸಿನಿಮಾ ಬಗ್ಗೆ ವಿಜಯ್ ಬಗ್ಗೆ ಮಾತ್ರ ಮಾತನಾಡಿಲ್ಲ ,,,, ಬದಲಾಗಿ ಯಶ್ , KGF 2 ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ..
“ ರಾಕಿಭಾಯ್‌ಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಇದೊಂದು ವಿಭಿನ್ನ ಕಥೆ, ದೊಡ್ಡ ಆಕ್ಷನ್ ಸಿನಿಮಾ, ನಮ್ಮದು ಭಾವನಾತ್ಮಕ ಸ್ಟೋರ್ಟ್ಸ್ ಸಿನಿಮಾ. ಕೌಟುಂಬಿಕ ಕಥೆ ಹಾಗೂ ಸಂದೇಶವಿದೆ.. ಕೆಜಿಎಫ್ 2 ಸೀಕ್ವೆಲ್ ಆಗಿರುವುದರಿಂದ ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಹೀಗಾಗಿ ನಮಗೆ ನಮ್ಮದೆ ಆದ ಸ್ಪೇಸ್ ಸಿಗುತ್ತೆ ಎಂದು ಕೊಂಡಿದ್ದೇನೆ. ನಮಗೆ ನಾಲ್ಕು ರಜೆಯ ದಿನಗಳಿವೆ. ಥಿಯೇಟರ್‌ಗಳೂ ಸಿಕ್ಕಿವೆ. ಹೀಗಾಗಿ ಪ್ರೇಕ್ಷಕರು ಎಲ್ಲಾ ಸಿನಿಮಾವನ್ನು ನೋಡುತ್ತಾರೆ. ದೊಡ್ಡ ದೊಡ್ಡ ಸಿನಿಮಾಗಳು ಒಟ್ಟಿಗೆ ಬರುತ್ತಿರುವುದು ಖುಷಿ ವಿಚಾರ” ಎಂದು ಹೇಳಿದ್ದಾರೆ.