Lockup : ಖ್ಯಾತ ನಿರ್ದೇಶಕನ ಜೊತೆ ಅಕ್ರಮ ಸಂಬಂಧದ ಬಗ್ಗೆ ಹಂಚಿಕೊಂಡ ಮಂದಾನಾ
ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಡೆಸಿಕೊಡ್ತಿರುವ ಒಟಿಟಿಯ ಡೇರಿಂಗ್ , ವಿವಾದಾತತ್ಮಕ ರಿಯಾಲಿಟಿ ಶೋನ ಲಾಕ್ ಅಪ್ ನಲ್ಲಿ ಇರೋರೆಲ್ಲಾ ವಿವಾದ ಪ್ರಿಯರೇ ಎಂದ್ರೆ ತಪ್ಪಾಗೋದಿಲ್ಲ..
ಇರೋರೆಲ್ಲಾ ಕಾಂಟ್ರವರ್ಸಿ ಮಾಡಿಕೊಂಡವರೇ..
ಇದೀ ನಟಿ ಮಂದಾನಾ ಕರೀಮಿ ತಾವು ಬಾಲಿವುಡ್‌ನ ಖ್ಯಾತ ನಿರ್ದೇಶಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಬಾಯ್ಬಿಟ್ಟಿದ್ದಾರೆ… ಮಂದಾನಾ ಕರೀಮಿಯ ಕತೆ ಕೇಳಿ ನಟಿ ಕಂಗನಾ ಹಾಗೂ ಇತರರು ಭಾವುಕರಾಗಿದ್ದಾರೆ.
ಮಂದಾನಾ ಕರೀಮಿ, ಪಾಯಲ್ ರೊಹ್ಟಗಿ, ಸೈಶಾ ಶಿಂಧೆ, ಶಿವಂ ಶರ್ಮಾ ಗೆ ಈ ವಾರ ಅತಿ ಕಡಿಮೆ ಮತಗಳು ಬಂದಿದ್ದವು. ಕಡಿಮೆ ಮತ ಬಂದವರು ಎಲಿಮಿನೇಶನ್ ನಿಂದ ತಪ್ಪಿಸಿಕೊಳ್ಳಲು ತಮ್ಮ ಜೀವನದಲ್ಲಿ ನಡೆದಿರುವ ಅತಿ ಕೆಟ್ಟ ಘಟನೆ ಅಥವಾ ತಾವು ಮುಚ್ಚಿಟ್ಟ ಘಟನೆಯೊಂದನ್ನು ಎಲ್ಲರ ಮುಂದೆ ಬಹಿರಂಗಪಡಿಸಬೇಕಾಗಿತ್ತು..
Megha Shetty : ಮಹೇಶ್ ಬಾಬು ಜೊತೆಗೆ ಮೇಘಾ ಶೆಟ್ಟಿ ನಟನೆ…???
ಈ ಅವಕಾಶವನ್ನು ಪಾಯಲ್ ಹಾಗೂ ಸೈಶಾ ಕೈಬಿಟ್ಟರು. ಆದರೆ ಮಂದಾನಾ ಕರೀಮಿ ತಮ್ಮ ಜೀವನದ ಕರಾಳ ಘಟನೆಯ ಬಗ್ಗೆ ಎಲ್ಲರ ಎದುರು ಹೇಳಿಕೊಂಡರು. ತಮಗೆ ಬಾಲಿವುಡ್ ನ ಖ್ಯಾತ ನಿರ್ದೇಶಕನೊಂದಿಗೆ ಅಕ್ರಮ ಸಂಬಂಧವಿತ್ತು.. ಅದರಿಂದಾಗಿ ನಾನು ಗರ್ಭಿಣಿ ಆಗಿದ್ದೆ ಎಂದಿದ್ದಾರೆ.
ಮಾರ್ಟಿನ್ ರಿಲೀಸ್ ಡೇಟ್ ಅನೌನ್ಸ್…!!! ಧ್ರುವನ ಅಬ್ಬರ ಯಾವಾಗ..??
ನಾನು ಪತಿ ಗೌರವ್ ಗುಪ್ತಾನಿಂದ ದೂರವಾದಾಗ ಬಹಳ ಬೇಸರದಲ್ಲಿದ್ದೆ. ಆಗಲೇ ನನಗೆ ಆ ನಿರ್ದೇಶಕನ ಪರಿಚಯವಾಯ್ತು. ನಾವಿಬ್ಬರೂ ಪರಸ್ಪರ ಸಂಬಂಧ ಹೊಂದಿದ್ದವು. ಒಮ್ಮೆ ನಾವು ತಂದೆ, ತಾಯಿ ಆಗುವ ಬಗ್ಗೆ ಯೋಚಿಸಿದ್ದೆವು. ಅಂತೆಯೇ ನಾನು ಗರ್ಭಿಣಿ ಆದೆ.. ಆದರೆ ಆತ ಆ ನಂತರ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಆ ಬಾಲಿವುಡ್ ನಿರ್ದೇಶಕ ಮಹಿಳೆಯರ ಹಕ್ಕುಗಳ ಬಗ್ಗೆ ಹಲವು ಸಿನಿಮಾಗಳನ್ನು ತೆಗೆದಿದ್ದಾನೆ. ಬಾಲಿವುಡ್ ಸಿನಿ ಪ್ರೇಮಿಗಳ ಆದರ್ಶ ಅವನು. ಆದರೆ ನನಗೆ ಹೀಗೆ ಮೋಸ ಮಾಡಿದ ಎಂದು ಕಣ್ಣೀರಿಟ್ಟ ವಿಡಿಯೋ ವೈರಲ್ ಆಗ್ತಿದೆ..
ಅಂದ್ಹಾಗೆ ಈ ಎಪಿಸೋಡ್ ಇನ್ನೂ ರಿಲೀಸ್ ಆಗಿಲ್ಲ.. ಬದಲಾಗಿ ಇದು ಪ್ರೋಮೋವಷ್ಟೇ.. ಶೋನ ಶೋ ಆಲ್ಟ್ ಬಾಲಾಜಿಯಲ್ಲಿ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ಮಂದಾನಾ ಕರೀಮಿಗೆ ಕೈ ಕೊಟ್ಟ ಬಾಲಿವುಡ್ ನ ಆ ಜನಪ್ರಿಯ ನಿರ್ದೇಶಕ ಯಾರೆಂದು ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ.