KGF ಚಾಪ್ಟರ್ 3 ಬರೋದು ಪಕ್ಕಾ..??? KGF ಚಾಪ್ಟರ್ ನಲ್ಲಿ ಸಿಕ್ಕಿತು ಸುಳಿವು..!!!
ಎಲ್ಲಿ ನೋಡಿದ್ರೂ ರಾಕಿ ಗುಣಗಾನ ,,, ಯಾರ್ ನೋಡಿದ್ರೂ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆಯೇ ಚರ್ಚೆ… ಕೆಜಿಎಫ್ ಬಗ್ಗೆಯೇ ಮಾತುಕತೆ… ಸಿನಿಮಾ ಬಾಕ್ಸ್ ಆಫೀಸ್ ನನಲ್ಲಿ ಧೂಳೆಬ್ಬಿಸುತ್ತೆದೆ.. ಗ್ಲೋಬಲ್ ನಲ್ಲಿ ರೂಲ್ ಮಾಡ್ತಿದೆ.. ಭಾರತದಲ್ಲೇ 134 ಕೋಟಿ ಫಸ್ಟ್ ಡೇ ಕಲೆಕ್ಷನ್.. ಓವರ್ ಆಲ್ ಗ್ಲೋಬಲ್ ನಲ್ಲಿ ಸುಮಾರು 275 ಕೋಟಿ ಕಲೆಕ್ಷನ್ ಮಾಡಿದೆ..
ಕೆಜಿಎಫ್ ಚಾಪ್ಟರ್ 2 ಸಿನಿಮಾ ಗುರುವಾರ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತುಫಾನ್ ಎಬ್ಬಿಸಿದೆ.
ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಎಂಟರ್ ಟೈನರ್ ಆಗಿ ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿಯೂ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇದೀಗ ಸಿನಿಮಾದಿಂದ ಸಿಕ್ಕಿರುವ ಸುಳಿವು ಸೆನ್ಷೇಷನ್ ಹುಟ್ಟುಹಾಕಿದೆ.. ಗಾಸಿಪ್ ಕಿಡಿಗೆ ಬೆಂಕಿ ಹೊತ್ತಿಸಿದೆ.. ಅದೇ KGF ಚಾಪ್ಟರ್ 3 ಬರಲಿದೆ ಎನ್ನೋದು..
ಇಲ್ಲಿವರೆಗೂ ಇಂಡಿಯಾದಲ್ಲಿ ನಡೆದ ಕೆಜಿಎಫ್ ಕಥೆ ಈ ಚಾಪ್ಟರ್ 3 ನಲ್ಲಿ ಇಂಟರ್ ನ್ಯಾಷನಲ್ ಲೆವೆಲ್ ಇರುತ್ತದೆ. ಅದಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೊನೆಯಲ್ಲಿ ಒಂದು ಸುಳಿವು ಕೊಟ್ಟಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ರಾಕಿಭಾಯ್ ಬರುತ್ತಿದ್ದರೇ ಆತನ ಹಡಗನ್ನು ಅಮೆರಿಕಾ, ಇಂಡೋನೇಷಿಯಾ ದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಚೇಸಿಂಗ್ ಮಾಡುತ್ತಿರುತ್ತಾರೆ.
ರಾಕಿಭಾಯ್ ಸಾಮ್ರಾಜ್ಯ ವಿದೇಶದಲ್ಲಿ ಕೂಡ ವಿಸ್ತರಿಸಿದಂತೆ ತೋರಿಸಲಾಗಿದೆ. ಜೊತೆಗೆ ರಾಕಿ ಬಗ್ಗೆ ಭಾರತದ ಪ್ರಧಾನಿಗೆ ಅಮೆರಿಕ ದೂರು ನೀಡಿದಂತಿದೆ.
ಇವುಗಳನ್ನು ನೋಡಿದ ಸಿನಿಮಾ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 3 ಕೂಡ ಬರುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ..