Shankar : ಸ್ಟಾರ್ ನಿರ್ದೇಶಕ ಶಂಕರ್ 59 ನೇ ಹುಟ್ಟುಹಬ್ಬ..!!
ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಅವರಿಗೆ 59 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಇಂಡಿಯನ್ 2 ಚಿತ್ರದಲ್ಲಿ ಬ್ಯುಸಿಯಿರುವ ಸ್ಟಾರ್ ನಿರ್ದೇಶಕ ಶಂಕರ್ ಗೆ ಅಭಿಮಾನಿಗಳು , ಆಪ್ತರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ಧಾರೆ..
ಭಾರತದ ಸ್ಟಾರ್ ನಿರ್ದೇಶಕರ ಪೈಕಿ ಶಂಕರ್ ಸಹ ಬ್ಬರು.. ಕಮಲ್ ಹಾಸನ್ ರಿಂದ ಹಿಡಿದು ರಜನಿಕಾಂತ್ ವರೆಗೆ ಕಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆಗೆ ಬ್ಲಾಕ್ ಬಸ್ಟರ್ ಗಳನ್ನು ಮಾಡಿದ್ದಾರೆ.. ಅವರ ರೋಬೋ , ರೋಬೋ 2 ಸಿನಿಮಾ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಗಳನ್ನ ಬರೆದಿದ್ದವು..
ಅವರ ಅನಿಯನ್ ಸಿನಿಮಾದ ಕ್ರೇಜ್ ಈಗಲೂ ಇದೆ..
1996 ರ ಇಂಡಿಯನ್ ಸಿನಿಮಾದ ಮುಂದುವರಿದ ಭಾಗವಾದ ಇಂಡಿಯನ್ 2 ನಲ್ಲಿ ಶಂಕರ್ ಬ್ಯುಸಿಯಾಗಿದ್ದಾರೆ. ಇಂಡಿಯನ್ 2 ನಲ್ಲಿ ಕಮಲ್ ಹಾಸನ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ವಯಸ್ಸಾದ ಜಾಗೃತ ಸಿಬ್ಬಂದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲ ಭಾಗದಂತೆ ಈ ಚಿತ್ರವೂ ಭ್ರಷ್ಟಾಚಾರದ ವಿರುದ್ಧ ಬಲವಾದ ಸಂದೇಶವನ್ನು ನೀಡುವ ಸಾಧ್ಯತೆಯಿದೆ. ಇಂಡಿಯನ್ 2 ನಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ . ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್ ಮತ್ತು ಸಿದ್ಧಾರ್ಥ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ..
ಇದರ ಜೊತೆಗೆ RC15 , ರಾಮ್ ಚರಣ್ ಅವರ 15 ನೇ ಸಿನಿಮಾದಲ್ಲೂ ಶಂಕರ್ ಬ್ಯುಸಿಯಾಗಿದ್ದಾರೆ.. ನಂತರ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.. ಅನಿಯನ್ ಸಿನಿಮಾದ ಹಿಂದಿ ರೀಮೇಕ್ ಗೆ ಶಂಕರ್ ಅವರದ್ದೇ ಡೈರೆಕ್ಷನ್ ಇರಲಿದೆ..