ಬಿಗ್ ಬಾಸ್ ಕನ್ನಡ ಸೀಸನ್ 9 ಎರಡನೇ ವಾರ ಮುಕ್ತಾಯಗೊಂಡಿದೆ.. 2 ನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಸೈಕ್ ನವಾಜ್ ಹೋಗಿದ್ದಾರೆ.. ಉಳಿದ 16 ಕಂಟೆಸ್ಟೆಂಟ್ ಗಳ ನಡುವೆ ಇನ್ಮುಂದೆ ಆಟ ಹೇಗಿರಕಿದೆ ಅನ್ನೋ ಕುತೂಹಲ ಇದ್ದೇ ಇದೆ..
ಒಟಿಟಿ ಸೀಸನ್ ನಲ್ಲಿಯೇ ಗುರೂಜಿ ಹಾಗೂ ರಾಕೇಶ್ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು… ಅದೇ ಆತ್ಮೀಯತೆ ಟಿವಿ ಸೀಸನ್ ನಲ್ಲೂ ಕೂಡ ಮುಂದುವರೆದಿದೆ..
ಇಬ್ಬರೂ ಕೂಡ ಒಟಿಟಿ ಹಾಗೂ ಟಿವಿ ಎರೆಡೂ ಸೀಸನ್ ಗಳಲ್ಲೂ ಭಿನ್ನ ವ್ಯಕ್ತಿತ್ವಗಳಿಂದ ಹೈಲೇಟ್ ಆಗ್ತಿರುವ ಸ್ಪರ್ಧಿಗಳಾಗಿದ್ದಾರೆ.. 3 ನೇ ವಾರ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆಗಿದ್ದಾರೆ,..
ಅಂದ್ಹಾಗೆ ವೀಕೆಂಡ್ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ರಾಕೇಶ್ ಜೊತೆಗೆ ಕಳೆದ ಒಂದು ವಾರದಲ್ಲಿ ಜೊತೆಗಿದ್ದಾಗ ನಡೆದ ಇಂಟ್ರೆಸ್ಟಿಂಗ್ ವಿಚಾರವನ್ನ ಬಿಚ್ಚಿಟ್ಟಿದ್ದಾರೆ..
ವಾರಾಂತ್ಯದ ಪಂಚಾಯಿತಿಯಲ್ಲಿ ಯಾವ ವ್ಯಕ್ತಿ ಆಗೋಕೆ ಇಷ್ಟ ಇಲ್ಲ ಎಂದು ಸುದೀಪ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಮಯದಲ್ಲಿ ಗುರೂಜಿ ನನಗೆ ರಾಕೇಶ್ ಅಡಿಗ ಆಗೋಕೆ ಇಷ್ಟ ಇಲ್ಲ ಎಂದಿದ್ದಾರೆ. ಯಾಕೆ ಎಂದು ಕೇಳಿದಾಗ ರೂಮ್ ನಲ್ಲಿ ನಡೆದಿರೋದನ್ನ ಹೇಳೋದ್ದಕ್ಕೆ ಆಗಲ್ಲ ಎಂದಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದು ಕುತೂಹಲ ಕೆರಳಿಸುವಂತೆ ಉತ್ತರಿಸಿದ್ದಾರೆ.
ರಾಕೇಶ್ ನ ಕಂಡರೆ ಭಯವಾಗುತ್ತದೆ. ರೂಮ್ ನಲ್ಲಿ ಒಂದು ವಾರಗಳ ಕಾಲ ಸಾಕಷ್ಟು ವಿಚಾರಗಳನ್ನ ನಾವು ಹಂಚಿಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ. ಜನಕ್ಕೆ ನೆಗಟಿವ್ ಮೇಸೆಜ್ ಹೋಗುತ್ತದೆ ಅದು ನು ಅಂತಾ ಹೇಳಿ ಎಂದು ರಾಕೇಶ್ ಕೂಡ ಗುರೂಜಿಗೆ ಮನವಿ ಮಾಡಿದ್ದಾರೆ. ಆದ್ರೂ ಗುರೂಜಿ ಮಾತ್ರ ಈ ಬಗ್ಗೆ ಸಸ್ಪೆನ್ಸ್ ಕಾಯ್ದಿರಿಸಿಕೊಂಡಿದ್ದು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ..
BiggBoss Kannada 9 : ಮನೆಯಿಂದ ಹೊರಬಂದ ಸೈಕ್ ನವಾಜ್..!! ಪಂಚಿಂಗ್ ಡೈಲಾಗ್ ಗಳು ವರ್ಕೌಟ್ ಆಗಲಿಲ್ಲ..!!