BiggBoss Kannada 9 : ಒಟಿಟಿಯಲ್ಲಿ ಸಖತ್ ಹೈಲೇಟ್ ಆಗಿದ್ದ ರಾಕೇಶ್ ಆಡಿಗ ಟಿವಿ ಸೀಸನ್ ನಲ್ಲೂ ಮಿಂಚುತ್ತಿದ್ದಾರೆ
ಬಿಗ್ ಬಾಸ್ ಸೀಸನ್ 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. 2 ವಾರ ಮುಗಿದು ಮೂರನೇ ವಾರಕ್ಕೆ ಬಂದಿದೆ.. ಮನೆಯ ಮೂರನೇ ವಾರದ ಕ್ಯಾಪ್ಟನ್ ಆರ್ಯವರ್ಧನ್ ಗುರೂಜಿ.. ಮೊದಲನೇ ವಾರ ಶ್ವರ್ಯ ಪಿಸ್ಸೆ 2ನೇ ವಾರ ಸೈಕ್ ನವಾಜ್ ಎಲಿನಿಮೇಟ್ ಆಗಿದ್ದಾರೆ.. ಇನ್ನೂ 16 ಕಂಟೆಸ್ಟೆಂಟ್ ಗಳು ಬಾಕಿಯಿದ್ದು , ಒಬ್ಬೊಬ್ಬರೂ ಒಂದೊಮದು ರೀತಿಯ ವ್ಯಕ್ತಿತ್ವಗಳಿಂದ ಗುರುತಿಸಿಕೊಳ್ತಿದ್ದಾರೆ..
ಅದ್ರಲ್ಲೂ ಒಟಿಟಿಯಲ್ಲಿ ಸಖತ್ ಹೈಲೇಟ್ ಆಗಿದ್ದ ರಾಕೇಶ್ ಆಡಿಗ ಟಿವಿ ಸೀಸನ್ ನಲ್ಲೂ ಮಿಂಚುತ್ತಿದ್ದಾರೆ.. ತರ್ಲೆಗಳನ್ನ ಮಾಡುತ್ತಾ , ಹುಡುಗೀರ ಜೊತೆ ಆಗೊಮ್ಮೆ ಈಗೊಮ್ಮೆ ಫರ್ಟ್ ಮಾಡುತ್ತಾ ಇರುತ್ತಾರೆ.. ಪ್ರ್ಯಾಂಕ್ ಮಾಡಿ ಎಡವಟ್ಟು ಮಾಡಿಕೊಂಡು ಜೈಲಿಗೂ ಹೋಗಿ ಬಂದಿದ್ದಾರೆ..
ಅಂದ್ಹಾಗೆ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಾಕೇಶ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.. ಮನೆಯಲ್ಲಿ ರಾಕೇಶ್ ಅಡಿಗ ಅವರು ಭಾವನೆಗಳನ್ನು ಹೊರಹಾಕುವುದಿಲ್ಲ ಎಂಬ ಆರೋಪವನ್ನು ಅನುಪಮಾ ಗೌಡ ಮಾಡಿದ್ದರು. ಆಗ ಸುದೀಪ್ ಅವರು ಎಲ್ಲಾ ವಿಚಾರಗಳಲ್ಲಿ ರಾಕೇಶ್ ಅಡಿಗ ಅವರು ತಮ್ಮ ಭಾವನೆಯನ್ನು ಎಕ್ಸ್ಪ್ರೆಸ್ ಮಾಡಬೇಕು ಎಂದು ನಿರ್ದೇಶನ ನೀಡಿದ್ದನ್ನ ಇದೀಗ ರಾಕೇಶ್ ಪಾಲಿಸುತ್ತಿರುವಂತೆ ಕಾಣುತ್ತಿದೆ..
ರಾಕೇಶ್ ಗೆ ಅರುಣ್ ಸಾಗರ್ ಟ್ರೇನಿಂಗ್ ನೀಡುತ್ತಿದ್ದಾರೆ. ಈಗ ಹೆಚ್ಚಾಗಿ ಓಪನ್ ಅಪ್ ಆಗುತ್ತಿರುವ ರಾಕೇಶ್ ತಮಗೆ ಅನಿಸಿದ ಮಾತನ್ನ ಹೇಳಿಕೊಳ್ತಾ ಎಮೋಷನ್ಸ್ ತೋರಿಸಿಕೊಳ್ತಿದ್ದಾರೆ ಎನಿಸುತ್ತಿದೆ…