Thursday, February 2, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಶೇಷ

Ravichandran : ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ – ವೇದಿಕೆ ಮೇಲೆ ಭಾವುಕರಾದ ಕ್ರೇಜಿ ಸ್ಟಾರ್..!!

ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ, ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನಗೆ ಇದೆ.. ಜನ ಮತ್ತೆ ಅದೇ ಕ್ರೇಜ್ ನಲ್ಲಿ ನನ್ನ ಸಿನಿಮಾ ನೋಡೋಕೆ ಥಿಯೇಟರ್ ಗೆ ಬಂದೇ ಬರುತ್ತಾರೆ..

Namratha Rao by Namratha Rao
October 11, 2022
in ವಿಶೇಷ, ಸಿನಿ ಕಾರ್ನರ್
0
ravichandran
Share on FacebookShare on TwitterShare on WhatsApp

ಕ್ರೇಜಿ ಸ್ಟಾರ್ ರವಿಚಂದ್ರನ್…. ಆ ಕಾಲದಲ್ಲಿ ಕ್ರೇಜಿಸ್ಟಾರ್ ಕ್ರೇಜ್ ಹೇಗಿತ್ತು ಅನ್ನೋದನ್ನ ಮತ್ತೆ ಹೇಳೋ ಅವಶ್ಯಕತೆ ಇಲ್ಲ… ಅವರ ಒಂದು ಸಿನಿಮಾ ಬರುತ್ತಿದೆ ಅಂದ್ರೆ ರಾತ್ರಿ ಥಿಯೇಟರ್ ಗಳ ಮುಂದೆ ಜನ ಕ್ಯೂ ನಿಂತಿದ್ದ ದಾಹರಣೆಗಳಿವೆ.. ಥಿಯೇಟರ್ ಗೆ ಜನರು ನಗುತ್ತಿದ್ದರು ರವಿಚಂದ್ರನ್ ಸಿನಿಮಾಗಳಂದ್ರೆ ಆಗ ಅಷ್ಟು ಕ್ರೇಜ್.. ಅದ್ರಲ್ಲೂ ಪ್ರೇಮಲೋಕ ರಣಧೀರ ಸಿನಿಮಾಗಳ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.. ಪ್ರೇಮಲೋಕ ಕ್ರಿಯೇಟ್ ಮಾಡಿದ್ದ ಹವಾ..!! ಆ ಸಿನಿಮಾದ  ಅಲೆ  ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು..

ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನ ನೀಡಿದ್ದ ರವಿಮಾಮ ಅದಾದ ನಂತರ ಕೊಂಚ ಬಾಕ್ಸ್ ಆಫೀಸ್ ನಲ್ಲಿ ಡಲ್ ಆಗಿಬಿಟ್ಟರು.. ಸಿನಿಮಾಗಳು ಕಡಿಮೆಯಾಯ್ತು.. ಅಂದುಕೊಂಡ ಮಟ್ಟಿಗೆ ಯಾವ ಸಿನಿಮಾಗಳು ಯಶಸ್ಸು ಕಾಣುತ್ತಿರಲಿಲ್ಲ..    ಅದಾದ ನಂತರ ರವಿಚಂದ್ರನ್ ಅವರ ದೃಶ್ಯಂ ಸಿನಿಮಾ ಭಾರೀ ಹಿಟ್ ಆಯ್ತು.. ರವಿಚಂದ್ರನ್ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡರು.. ದೃಶ್ಯಂ 2 ಕೂಡ ಹಿಟ್ ಆಯ್ತು.. ಆಧ್ರೆ ಅವರ ರವಿ ಬೋಪಣ್ಣ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಯ್ತು..

ಬೆಳ್ಳಿ ತೆರಯಿಂದ ಕಿರುತೆರೆಗೆ ಬಂದರು.. ರಿಯಾಲಿಟಿ ಶೋಗಳಿಗೆ ಜಡ್ಜ್ ಆದರು.. ಆಧ್ರೆ ರವಿಚಂದ್ರಬ್ ಅವರು ಜೀವನದಲ್ಲಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ, ಎಷ್ಟೆಲ್ಲಾ ನಷ್ಟ ಅನುಭವಿಸಿದ್ದಾರೆ ಈ ಎಲ್ಲದರ ಬಗ್ಗೆ ಇತ್ತೀಚೆಗೆ ಕಾಮಿಡಿ ಕಿಲಾಡಿಗಳು , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಸರಿಗಮಪ ರಿಯಾಲಿಟಿ ಶೋಗಳ ಮಹಾಸಂಚಿಕೆಯ ವೇದಿಕೆ ಮೇಲೆ ಹಂಚಿಕೊಳ್ಳುತ್ತಾ ಭಾವುಕರಾಗಿದ್ದರು..

ರವಿಚಂದ್ರನ್ ಅವರ ಮಾತುಗಳನ್ನ ಕೇಳಿ ಅಲ್ಲಿ ಉಪಸ್ಥಿತರಿದ್ದ ಜಡ್ಜ್ ಗಳು , ನಿರೂಪಕಿ ಅನುಶ್ರೀ ,  ಪ್ರೇಕ್ಷಕರು ಭಾವುಕರಾಗಿದ್ದಾರೆ.. ಅನುಶ್ರೀ ಅವರಂತೂ ವೇದಿಕೆಯ ಮೇಲೆಯೇ ಕಣ್ಣೀರಿಟ್ಟಿದ್ದಾರೆ.. ರವಿಚಂದ್ರನ್ ಅವರ   ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು , ನೆಟ್ಟಿಗರ ಕಣ್ ಒದ್ದೆಯಾಗಿಸಿದೆ..

ಅಂದ್ಹಾಗೆ ಇದು ರವಿಚಂದ್ರನ್ ಅವರ ಮಾತು…

ಪ್ರೇಮಲೋಕ , ರಣಧೀರ ಸಿನಿಮಾಗಳ ಬಗ್ಗೆ ಏನೇ ಬಂದ್ರು ಅದು ನಮ್ಮನ್ನ ಎಲ್ಲಿಗೋ ಕರೆದುಕೊಂಡು ಹೋಗುತ್ತೆ.. ಹಿಂದಕ್ಕೆ ಕರೆದುಕೊಂಡು ಹೋಗುತ್ತೆ.. ಇತ್ತೀಚೆಗೆ ನನ್ನ ಸಿನಿಮಾಗಳನ್ನ ಜನರು ನೋಡುತ್ತಿಲ್ಲವೋ ಅಥವ ಇಷ್ಟಪಡುತ್ತಿಲ್ಲವೋ ಅಂದಾಗ ನನಗೆ ಬೇರೆ ಅವರ ಜೊತೆಗೆ ಕಾಂಪೀಟ್ ಮಾಡೋದಕ್ಕೆ ಆಗುತ್ತಿಲ್ಲ ಅನಿಸೋದಿಲ್ಲ.. ನನಗೆ ಖುದ್ದು ನನ್ನ ಜೊತೆಗೆ ಕಾಂಪೀಟ್ ಮಾಡೋಕೆ ಆಗ್ತಿಲ್ಲ.. ದಕ್ಕಿಂತ ನ್ನೇನು ಮಾಡೋದು ಎಂಬ ಪ್ರಶ್ನೆ ಮೂಡುತ್ತದೆ..

ನಾನು 30 ವರ್ಷದ ಹಿಂದೆಯೇ ಇದನ್ನೆಲ್ಲ ಮಾಡಿ ಬಿಟ್ಟಿದ್ದೇನೆ, ಈಗ ನಾನು ಏನೇ ಮಾಡಿದರೂ ಚಿಕ್ಕದಾಗಿ ಕಾಣುತ್ತಿದೆ. 20 ವರ್ಷದಿಂದ ನನ್ನ ಮನಸ್ಸಿಗೆ ಬಂದದ್ದೇ ನಾನು ಮಾಡಿದ್ದು, ಈ ಮನಸ್ಸಿಂದ ಮಾಡಿರುವುದು ಹೋಗ್ತ ಹೋಗ್ತ ಪಾತ್ರವಾಗಿ ನಮ್ಮೊಳಗೆ ಸೇರಿಕೊಳ್ಳತ್ತೆ.

ಕಳಕಳಿಯಿಂದ, ಲವಲವಿಕೆಯಿಂದ ಸಿನಿಮಾ ಮಾಡುವ ವಿಧ ಇರತ್ತೆ, ಲವಲವಿಕೆಯಿಂದ ಸಿನಿಮಾ ಮಾಡುತ್ತಿದ್ದವನು ನಾನು. ಕಟೌಟ್‌ ನಲ್ಲಿ ಹಾರ ಬಿದ್ದರೆ ಇಷ್ಟ ಆಗಲ್ಲ, ಥಿಯೇಟರ್‌ ನಲ್ಲಿ ಜನ ಇಲ್ಲ ಅಂದರೆ ಕಪಾಳಕ್ಕೆ ಹೊಡೆದಷ್ಟು ಬೇಜಾರಾಗುತ್ತದೆ.

add

ನಾನು ಈ ವೇದಿಕೆಗೆ ಬಂದಿರೋದು ನನ್ನನ್ನು ಬದಲಾಯಿಸಿಕೊಳ್ಳೋಕೆ. ನಾನು ಇನ್ನು ಏಕಾಂಗಿ ಪಾತ್ರ ಮಾಡೋದಿಲ್ಲ, ಒಬ್ಬರೇ ಖುಷಿಯಾಗಿರಿ ಎನ್ನುತ್ತಿದ್ದೆ, ಈಗ ಎಲ್ಲರೂ ಖುಷಿಯಾಗಿರೋಣ ಅಂತ ಹೇಳುವೆ. ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದಾಗ, ದುಡ್ಡು ಕಳೆದುಕೊಂಡ, ಮನೆ ಖಾಲಿ ಮಾಡಿದ ಅಂತ ಕೆಲವರು ಹೇಳಿದರು. ನಾನು ಈಗ ದುಡ್ಡು ಕಳೆದುಕೊಂಡಿಲ್ಲ, 30 ವರ್ಷದಿಂದ ನಿಮಗೋಸ್ಕರ, ನಿಮ್ಮನ್ನು ಮೆಚ್ಚಿಸಲು ದುಡ್ಡು ಕಳೆದುಕೊಂಡೆ.

ಇಂದು ಏನೇ ಆದರೂ ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ, ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನಗೆ ಇದೆ.. ಜನ ಮತ್ತೆ ಅದೇ ಕ್ರೇಜ್ ನಲ್ಲಿ ನನ್ನ ಸಿನಿಮಾ ನೋಡೋಕೆ ಥಿಯೇಟರ್ ಗೆ ಬಂದೇ ಬರುತ್ತಾರೆ..

ದುಡ್ಡಿಗಾಗಿ ನಾನು ದುಡಿಯಲಿಲ್ಲ. ನಾನು ಇಂದು ಸಂಪಾದನೆ ಮಾಡುತ್ತಿರುವುದು, ಯಾಕೆ ಇಲ್ಲಿಗೆ ಬಂದು ಕೂರುತ್ತೀನಿ ಅಂದರೆ ನನಗೆ ಹಣ ಬೇಕು, ನಾನು ಐಷಾರಾಮಿಯಾಗಿ ಬದುಕಲಿಕ್ಕೆ ನನಗೆ ಹಣ ಬೇಡ.. ಅದಕ್ಕಾಗಿ ನಾನು  ಸಂಪಾದನೆ ಮಾಡುತ್ತಿಲ್ಲ, ಅದ್ದೂರಿಯಾಗಿ ಸಿನಿಮಾ ಮಾಡಲು ದುಡಿಯುತ್ತಿದ್ದೇನೆ.

ನಾನು ಆಗ ಯಾವ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೆನೋ ಅವನು ಇವತ್ತು 1.5 ಕೋಟಿ ರೂಪಾಯಿ ಕೊಟ್ಟು ಅವನ ಸಿನಿಮಾದಲ್ಲಿ ನಟಿಸಲು ನನ್ನ ಕರೆಯುತ್ತಾನೆ ಎನ್ನುವಷ್ಟರ ಮಟ್ಟಿಗೆ ನನ್ನ ಜೊತೆಯಲ್ಲಿರುವ ಹುಡುಗರು ಬೆಳೆದಿದ್ದಾರೆ. ಇದಕ್ಕಿಂತ ನ್ನೇನು ಬೇಕು ನನಗೆ..

ಮಾತೆತ್ತಿದರೆ  ಪ್ರೇಮಲೋಕ ,  ರಣಧೀರ  ಅಂತ ಹೇಳ್ತಾರೆ ಇವರು ಅಂತ ಕೆಲವರು ಲೇವಡಿ ಮಾಡ್ತಾರೆ.. ನೀವು ಹುಟ್ಟಿಸಿದ ಅಪ್ಪ ಅಮ್ಮನನ್ನು ಬದಲಾಯಿಸೋಕೆ ಆಗತ್ತಾ.. ಅದೇ ನಮ್ಮನ್ನು ಇಲ್ಲಿಯವರೆಗೆ ಕರೆದುಕೊಂಡು ಬಿಟ್ಟಿದೆ. ಆ ಸಿನಿಮಾ ನೋಡಿ ನಿಮ್ಮ ಅಪ್ಪ ಅಮ್ಮ ಪ್ರೀತಿಸಲು ಶುರು ಮಾಡಿದರು.

ನನ್ನ ಜೀವನದಲ್ಲಿ ಭಯ ಅನ್ನೋದು ಇರಲಿಲ್ಲ. ಆದರೆ ನನಗೆ ಮಕ್ಕಳು ಹುಟ್ಟಿದಾಗ ಭಯವಾಯ್ತು.. ಇಲ್ಲಿಯವರೆಗೂ ಆಗಿದ್ದಾಯ್ತು.. ಮುಂದೆ ಅವರಿಗೇನು..?? ಅವರಿಗಾಗಿ ಏನೂ ಮಾಡಿಲ್ವಲ್ಲ  ಯೋಚನೆ ಬಂದಾಗ ಭಯವಾಯ್ತು.. ನಾವು ಹೇಗೋ ಬದುಕುಬಿಡ್ತೀವಿ, ಮಕ್ಕಳಿಗೋಸ್ಕರ ಏನಾದರೂ ಮಾಡಬೇಕಲ್ಲವಾ ಎಂದು ಅನಿಸುತ್ತದೆ.

ಕಂಠೀರವ ಪಕ್ಕ ಒಂದು ಎಕರೆಗೆ ಆಗ 10000 ರೂಪಾಯಿ. ನಾನು 10000 ಸಾವಿರ ಎಕರೆ ಖರೀದಿ ಮಾಡಿದ್ದರೆ ಆ ಆಸ್ತಿಗೂ ನಿಮಗೂ ಏನು ಸಂಬಂಧ ಅದನ್ನು ನೋಡಿ ನೀವು ನನ್ನನ್ನು ಪ್ರೀತಿಸಿದರೆ ಆ ಪ್ರೀತಿ ಬೇಡ ನಂಗೆ, ಜೀವನವೂ ಬೇಡ ನಂಗೆ. ನನ್ನ ಮುಖ ನೋಡಿ ಪ್ರೀತಿಸಿದರೆ ಜೀವನ ಪೂರ್ತಿ ನಿಮ್ಮ ಕಾಲಡಿ ಬಿದ್ದಿರ್ತೀನಿ… ಎಂದಿದ್ದು ಭಾವುಕರಾಗಿದ್ದಾರೆ.. ರವಿಚಂದ್ರನ್ ಅವರ ಮಾತು ಕೇಳಿ ಆಡಿಯನ್ಸ್ ಕೂಡ ಭಾವುಕರಾಗಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ರವಿಮಾಮನನ್ನ ಹುರಿದುಂಬಿಸಿದ್ದಾರೆ..

Kushboo : ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು..!!

 

Tags: kannada realityshowravichandranSandalwoodviral
ShareTweetSend
Join us on:

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
  • Thalapathi67 : ಮತ್ತೆ ಒಂದಾದ ‘ಮಾಸ್ಟರ್’ ಜೋಡಿ
  • Kangana : ಚಂದ್ರಮುಖಿ 2 ನಲ್ಲಿ ಬಾಲಿವುಡ್ ‘ಕ್ವೀನ್’ – ನೃತ್ಯ ತರಬೇತಿ ಶರು..!!
  • Kichha sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 27 ವರ್ಷ
  • Nayantara : #Metoo : ಕರಾಳ ಅನುಭವ ಬಿಚ್ಚಿಟ್ಟ ಲೇಡಿ ಸೂಪರ್ ಸ್ಟಾರ್
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram