Kantara : ಕಾಂತಾರ ಮುಂದೆ ರಶ್ಮಿಕಾ ‘ಗುಡ್ ಬೈ’ಗೆ ಟಾಟಾ ಬೈ ಬೈ ಅಂದ ಜನ..!!
ಒಂದೆಡೆ ಕಾಂತಾರ ಅನ್ನೋ ಅಲೆ ದೇಶಾದ್ಯಂತ ಜನರನ್ನ ವರಿಸಿಬಿಟ್ಟಿದೆ.. ಸಿನಿಟೌನ್ ನಲ್ಲಿ ಕಾಂತಾರದ್ದೇ ಟಾಕಾಗಿದೆ..
ಕನ್ನಡ , ಹಿಂದಿ , ತಮಿಳು , ತೆಲುಗು , ಮಲತಯಾಳಂ ಎಲ್ಲಿ ನೋಡಿದ್ರು ಕಾಂತಾರದ್ದೇ ಸೌಂಡು.. ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಧೂಳೆಬ್ಬಿಸುತ್ತಿದೆ.. ರಿಷಬ್ ನಟನೆಗೆ ಜನ ಫಿದಾ ಆಗಿದ್ದಾರೆ.. ಭೂತಾರಾಧನೆ ದೈವಾರಾಧನೆಯ ಝಲಕ್ ಗೆ ಜನರು ಪುಳಕಿತರಾಗಿದ್ದಾರೆ..
ಕರಾವಳಿ ಸಂಸ್ಕೃತಿಗೆ ಥ್ರಿಲ್ ಆಗಿದ್ದಾರೆ.. ಹಿಂದಿಯ ಸಿನಿಮಾಗಳನ್ನೂ ಮೀರಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾಂತಾರ ಮುಂದೆ ರಶ್ಮಿಕಾ ಸಿನಿಮಾಗೆ ಜನ ಟಾಟಾ ಗುಡ್ ಬೈ ಹೇಳಿದ್ದಾರೆ..
ಹೌದು..!!
ಹಿಂದಿ ವರ್ಷನ್ ನಲ್ಲಿ ಕಾಂತಾರ 9.27 ಕೋಟಿ ರೂಪಾಯಿ ಗಳಿಸಿದ್ದರೆ , ರಶ್ಮಿಕಾ ನಟನೆಯ ಚೊಚ್ಚಲ ಸಿನಿಮಾ ಗುಡ್ ಬೈ 11 ದಿನಗಳಲ್ಲಿ ಕೇವಲ 8 ಕೋಟಿ ಕಲೆಕ್ಷನ್ ಮಾಡಿದೆ.. ಅದು ಸಹ ಮೂಲ ಹಿಂದಿಯಲ್ಲೇ ರಿಲೀಸ್ ಆಗಿರುವ ಸಿನಿಮಾ ಇಷ್ಟು ಕಳಪೆ ಕಲೆಕ್ಷನ್ ಮಾಡಿ ಡಿಸಾಸ್ಟರ್ ಸಾಬೀತಾಗಿದೆ.. ಅಲ್ಲದೇ ಬಾಲಿವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ರಶ್ಮಿಕಾಗೆ ಹೀನಾಯ ಸೋಲಾಗಿದ್ದು , ಗೋಲ್ಡನ್ ಗರ್ಲ್ ಗೆ ಬಾಲಿವುಡ್ ನಲ್ಲಿ ಮುಂದೆ ಸಕ್ಸಸ್ ಸಿಗುತ್ತಾ ಎಂಬ ಅನುಮಾನಗಳು ಆರಂಭವಾಗಿದೆ..
ಗುಡ್ ಬೈ ಚಿತ್ರ ಬುಕ್ ಮೈ ಶೋ ನಲ್ಲೂ ಕಾಂತಾರ ಮುಂದೆ ಮಕಾಡೆ ಮಲಗಿದ್ದು , ಒಟ್ನಲ್ಲಿ ಮೊದಲ ಸಿನಿಮಾದಲ್ಲೇ ಅಭಿಮಾನಿಗಳು ರಶ್ಮಿಕಾಗೆ ಟಾಟಾ ಗುಡ್ ಬೈ ಹೇಳಿಬಿಟ್ಟಿದ್ದಾರೆ..
ಇದನ್ನೂ ಓದಿ : https://cinibazaar.com/2022/10/19/ramcharan-allu-arjun-cinibazaar/