R Chandru : ಸ್ಯಾಂಡಲ್ ವುಡ್ ನ ಯಜಮಾನ ಯಾರು..? ಈ ಪ್ರಶ್ನೆಯನ್ನ ಗಾಂಧಿ ನಗರದಲ್ಲಿ ಕೇಳಿದ್ರೆ ಸದ್ಯಕ್ಕೆ ಬರೋ ಉತ್ತರ ಶಿವಣ್ಣ..!
ಶಿವಣ್ಣನೇ ನಮ್ಮ ಯಜಮಾನ್ರು, ಅವರೇ ಸ್ಯಾಂಡಲ್ ವುಡ್ ನ ಹಿರಿಯಣ್ಣ ಅಂತಾ ಸಾಕಷ್ಟು ಸ್ಟಾರ್ ಕಲಾವಿದರೇ ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೂ ಶಿವಣ್ಣ ಮಾತ್ರ ಲೀಡರ್ ಪಟ್ಟದ ಮೇಲೆ ಸವಾರಿ ಮಾಡಲು ರೆಡಿ ಇಲ್ಲ. ಹಾಗಂತ ಅವರು ಸ್ಯಾಂಡಲ್ ವುಡ್ ನಿಂದಲೂ ದೂರ ಇಲ್ಲ. ಕರ್ನಾಟಕದ ಕಲಾವಿದರು ಮುಂದೆ ಬರ್ಬೇಕು. ಅವರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು, ಹೊಸ ಪ್ರತಿಭೆಗಳಿಗೆ ಚಾನ್ಸ್ ನೀಡಬೇಕು ಅಂತಾ ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಸಲಗ ಸಿನಿಮಾದ ಸಕ್ಸಸ್ ಮೀಟ್..!
ಹೌದು..! ಖಾಸಗಿ ಹೋಟೆಲ್ ನಲ್ಲಿ ನಡೆದ ಸಲಗ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಶಿವಣ್ಣ ಭಾಗಿಯಾಗಿದ್ದರು. ಈ ವೇಳೆ ಸಲಗ ಸಿನಿಮಾ ತಂಡದ ಬಗ್ಗೆ ಮಾತನಾಡುತ್ತಾ, ಕನ್ನಡದ ನಿರ್ದೇಶಕರಿಗೆ ಸ್ವೀಟ್ ವಾರ್ನಿಂಗ್ ನೀಡಿದ್ರು. ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ನಟಿಯರಿದ್ದಾರೆ, ಆದರೆ ಈ ಆರ್.ಚಂದ್ರು ಅಂಥಹವರು ಹೊರಗಡೆಯಿಂದ ನಟಿಯರನ್ನು ಕರೆದುಕೊಂಡು ಬರಲು ನೋಡುತ್ತಾರೆ. ನಮ್ಮಲ್ಲಿ ಟ್ಯಾಲೆಂಟ್ ಇರುವ ಹೆಣ್ಣು ಮಕ್ಕಳು ಇದ್ದಾರೆ. ನೀವು ಅದನ್ನು ಗಮನಿಸಬೇಕು. ನಮ್ಮ ಚಿತ್ರರಂಗದ ಹೆಣ್ಣುಮಕ್ಕಳನ್ನು ತಾತ್ಸಾರ ಮಾಡುವುದು ಬೇಡ, ಈ ವಿಷಯ ನಿಮ್ಮ ಮನಸ್ಸಿನಲ್ಲಿರಲಿ ಎಂದು ನೇರವಾಗಿಯೇ ನಿರ್ದೇಶಕ ಆರ್.ಚಂದ್ರುಗೆ ಸೂಚಿಸಿದರು.
ಇಲ್ಲಿ ಶಿವಣ್ಣ ಕೇವಲ ಆರ್. ಚಂದ್ರು ಅವರಿಗೆ ಮಾತ್ರ ಈ ಮಾತನ್ನ ಹೇಳಿದ್ದಲ್ಲ. ಬದಲಿಗೆ ಅವರು ಇಡೀ ಚಿತ್ರರಂಗವನ್ನ ಗಮನದಲ್ಲಿಟ್ಟುಕೊಂಡು ಹೇಳಿದ ಮಾತು. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಕನ್ನಡದ ನಿರ್ದೇಶಕರು, ಮೊದಲು ಕನ್ನಡಿಗರಿಗೆ ಆಧ್ಯತೆ ಕೊಡಬೇಕು. ನಂತರ ಬೇರೆ ಭಾಷೆ ಕಡೆ ನೋಡ್ಬೇಕು ಅಂತಾ ಶಿವಣ್ಣ ಸಲಹೆ ನೀಡಿದ್ದಾರೆ.
Love Mocktail 2 Release Update | ಮತ್ತೆ ಕಿಕ್ ಕೊಡುತ್ತಾ ಲವ್ ಮಾಕ್ಟೇಲ್…