Kangana Ranouth : 11ನೇ ವಯಸಸ್ಸಿನಲ್ಲೇ ತಮ್ಮ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ಬಿಚ್ಚಿಟ್ಟ ‘ಕ್ವೀನ್’
ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಒಂದ್ ರೀತಿ ಬಾಲಿವುಡ್ ‘ಕ್ವೀನ್’ ಗೆ ವಿವಾದಗಳಂದ್ರೆ ಭಾರೀ ಇಷ್ಟ ಏನ್ನುವಂತಾಗಿದೆ.. ಅವರ ಜನಪ್ರಿಯತೆಯೂ ಇತರರಿಗಿಂತ ಹೆಚ್ಚಿದೆ..
ಸದ್ಯ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಿರೋ ಕಂಗನಾ ತಾವು ಸಣ್ಣ ವಯಸ್ಸಿನಲ್ಲಿದ್ದಾಗಲೇ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ಧಾರೆ..
ಪೂನಂ ಪಾಂಡೆ, ಮನ್ವರ್ ಫರೂಕಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಮೇಲೆ ಆದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇದೀಗ ಆ ಶೋ ಹೋಸ್ಟ್ ಮಾಡ್ತಿರುವ ಕಂಗನಾ ತಮ್ಮ ಜೀವನದ ಕರಾಳ ಕಹಿ ಸತ್ಯ ಬಿಚ್ಚಿಟ್ಟಿದ್ದಾರೆ..
ಇತ್ತೀಚೆಗೆ ಪ್ರಸಾರವಾದ ಲಾಕ್ ಅಪ್ ಎಪಿಸೋಡ್ ನಲ್ಲಿ ಮನ್ವರ್ ಫರೂಕಿ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದರು. ಮೊದ ಮೊದಲು ಅದೇನು ಅಂತ ತಿಳಿಯುತ್ತಲೇ ಇರಲಿಲ್ಲ. ದೊಡ್ಡವರಾದ ಮೇಲೆ ಅದರ ಬಗ್ಗೆ ಅರಿವಾಯಿತು. ಆಮೇಲೆ ನಾನು ತಿರುಗಿಬಿದ್ದ ನಂತರ ಸುಮ್ಮನಾದರು ಎಂದು ಹೇಳಿಕೊಂಡರು. ಈ ಸಮಯದಲ್ಲಿ ತಮ್ಮ ಮೇಲೂ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಕಂಗನಾ ಹೇಳಿಕೊಂಡಿದ್ದಾರೆ.
11ರ ವಯದ್ದಿನಲ್ಲಿ ತಮಗಿಂತ ಮೂರ್ನಾಲ್ಕು ವರ್ಷ ದೊಡ್ಡವರಾದ ಹುಡುಗ ತಮ್ಮ ಬಟ್ಟೆಬಿಚ್ಚಿಸುತ್ತಿದ್ದನು… ಅವನು ಹಾಗೆ ಯಾಕೆ ಮಾಡುತ್ತಿದ್ದಾನೆ ಎಂದು ಆಗ ಗೊತ್ತಾಗಿರಲಿಲ್ಲ.. ಅವನಿಗೆ ಲೈಂಗಿಕ ಸಮಸ್ಯೆ ಇರಬೇಕು ಎಂದು ಆಮೇಲೆ ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ.
KGF 2 ಬಗ್ಗೆ ಮಾತನಾಡುತ್ತಾ ಹಿಂದಿ ಇನ್ನೂ ರಾಷ್ಟ್ರೀಯ ಭಾಷೆಯಾಗಿಲ್ಲ ಎಂದ ಕಿಚ್ಚ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮಿ ಬಾರಮ್ಮ’ ಚಿನ್ನು ರಶ್ಮಿ