ಭಾರಿ ನಿರೀಕ್ಷೆಗಳೊಂದಿಗೆ ರಿಲೀಸ್ ಆದ Vijay Devarakonda, ಪುರಿ ಜಗನ್ನಾಥ್ ಕಾಂಬೋದ ಲೈಗರ್ ಸಿನಿಮಾ ಮಿಶ್ರ ಟಾಕ್ ಪಡೆದುಕೊಂಡಿದೆ. ಸಿನಿಮಾ ಆಲ್ ಮೋಸ್ಟ್ ಫ್ಲಾಪ್ ಅಂತಾನೇ ಸಿನಿಮಾ ವರ್ಗಗಳು ಹೇಳುತ್ತಿವೆ. ಇದಕ್ಕೆ ಸಿನಿಮಾ ರಿಲೀಸ್ ಗೂ ಮುನ್ನಾ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗಳೇ ಕಾರಣ ಎಂದು ಥಿಯೇಟರ್ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.
Yash : ಬಾಲಿವುಡ್ ನಲ್ಲೂ ಯಶ್ ನಂಬರ್ 1 , ಹೀಗೆ ಹೇಳಿದ್ದೂ ಕೂಡ ಬಾಲಿವುಡ್ ನಟರೇ..!!
ಟ್ರೇಲರ್, ಪ್ರೆಸ್ ಮೀಟ್ ಗಳಿಂದ ಲೈಗರ್ ಸಿನಿಮಾ ಮೇಲೆ ಸಾಕಷ್ಟು ಕ್ರೇಜ್ ಹುಟ್ಟಿಕೊಂಡಿತ್ತು. ಇದೇ ಕಾರಣಕ್ಕೆ ಥಿಯೇಟರ್ ಮಾಲೀಕರು ಲೈಗರ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದ್ರೆ ಸಿನಿಮಾ ರಿಲೀಸ್ ಆದ ಬಳಿಕ ಸೀನ್ ರಿವರ್ಸ್ ಆಗಿದೆ. ಮುಂಬೈನ ಥಿಯೇಟರ್ ಮಾಲೀಕರೊಬ್ಬರು ನಟ ವಿಜಯ್ ದೇವರಕೊಂಡ ಮೇಲೆ ಫೈರ್ ಆಗಿದ್ದಾರೆ. ಒಂದು ಇಂಟರ್ ವಿವ್ಯೂನಲ್ಲಿ ನಟ ವಿಜಯ್ ಮಾತನಾಡುತ್ತಾ ನನ್ನ ಸಿನಿಮಾವನ್ನು ಬಾಯ್ ಕಾಟ್ ಮಾಡಿಕೊಳ್ಳಿ ಅಂತಾ ಹೇಳಿದ್ರು. ಆದ್ರೆ ಓಟಿಟಿ ಯಲ್ಲೂ ಕೂಡ ಈ ಸಿನಿಮಾವನ್ನು ಯಾರೂ ನೋಡಲ್ಲ. ನಿನ್ನ ನಡುವಳಿಕೆಯಿಂದಲೇ ನಾವು ನಷ್ಟ ಅನುಭವಿಸುತ್ತಿದ್ದೇವೆ. ಅಡ್ವಾನ್ಸ್ ಬುಕಿಂಗ್ ಮೇಲೆ ಅದರ ಎಫೆಕ್ಟ್ ಬಿದ್ದಿದೆ. ಮಿಸ್ಟರ್ ವಿಜಯ್, ನೀನು ಕೊಂಡ ಅಲ್ಲ ಅನಕೊಂಡ. ಅನಕೊಂಡ ರೀತಿಯಲ್ಲೇ ಮಾತನಾಡುತ್ತೀಯಾ. ವಿನಾಶಕಾಲೆ ವಿಪರೀತಬುದ್ಧಿ ಎನ್ನುತ್ತಾರೆ. ಆದ್ರೂ ನಾಶವಾಗುವ ಸಮಮದಲ್ಲಿಯೇ ಬಾಯಿಂದ ಇಂತಹ ಮಾತುಗಳೇ ಬರುತ್ತವೆ.
ಆವರೇಜ್ ಕೂಡ ಅಲ್ಲ , ಟ್ವಿಟ್ಟರ್ ನಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ..!!!
ವಿಜಯ್ ನೀನು ತುಂಬಾ ಅಹಂಕಾರಿ. ಇಷ್ಟ ಇದ್ದರೇ ನೋಡಿ, ಇಷ್ಟವಿಲ್ಲದಿದ್ದೇ ನೋಡಬೇಡಿ ಅಂತಾ ಹೇಳುತ್ತೀಯಾ, ಅದರ ಎಫೆಕ್ಟ್ ನಿನಗೆ ಗೊತ್ತಿಲ್ಲವೇ. ಅಮಿರ್ ಖಾನ್, ತಾಪ್ಸಿ, ಅಕ್ಷಯ್ ಕುಮಾರ್ ಸಿನಿಮಾಗಳು ಹೇಗೆ ಧೂಳಿಪಟವಾದವು ಅಂತಾ ನಿನಗೆ ಗೊತ್ತಿಲ್ಲವೇ? ಲೈಗರ್ ಸಿನಿಮಾದ ಮೇಲೆ ಅದೆಷ್ಟೋ ಆಸೆಗಳನ್ನು ಇಟ್ಟುಕೊಂಡಿದ್ದೆ. ಆದ್ರೆ ನೀನು ಬಾಯಿಗೆ ಬಂದಂತೆ ಮಾತನಾಡಿದ ಕಾರಣ ನಾವು ನಷ್ಟಕ್ಕೆ ತುತ್ತಾಗಿದ್ದೇವೆ ಎಂದು ಹೇಳಿದ್ದಾರೆ.
Liger : ಸಿನಿಮಾದ ಮೊದಲ ವಿಮರ್ಶೆ ಔಟ್…!! ಸಿನಿಮಾಗೆ ಎಷ್ಟು ಸ್ಟಾರ್..??